ಮಂಗಳವಾರ, ನವೆಂಬರ್ 29, 2016

ಪರಿಸರ ಹೇಳಿತು " ನಾ ಬದುಕಿದ್ದರೆ ನಿಮ್ಮ ಬದುಕು "

**** ಹೂವಿನ ದಳಗಳ ತುಂಬಾ ****
    ------------------$-------------------

 ಅರ್ಪಣಿ :-  ಯುವ ಸಂಚಲನ ತಂಡದ ವತಿಯಿಂದ
              ಇಡೀ ಮಾನವ ಕುಲ ಕೋಟಿಗೆ ಈ ಹಾಡು.

----$------$------$-------$--------$------$------$-----$---
              @.ಹೂವಿನ ದಳಗಳ ತುಂಬಾ.@

ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ದೂಳು.?
ನಿನ್ನ ಹೆರಳಿಗೂ ದೇವರ ಮುಡಿಗು ಹೇಗೆ ಮುಡಿಸಲೀ ಹೇಳು.?
ಅಮ್ಮ ಹೇಗೆ ಮುಡಿಸಲಿ ಹೇಳು.??????

ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ದೂಳು-?
ಸುತ್ತಲೂ ಕಾಣುವ ಗಿಡಮರವೆಲ್ಲಾ ಯಾಕಿಷ್ಟೊಂದು ಬೋಳು.?
ಹಾರುವ ಹಕ್ಕಿಗೆ ಅಲೆಯುವ ದುಂಬಿಗೆ ಸ್ಥಳವಿನ್ನೆಲಿದೆ ಹೇಳು.?
ಅಮ್ಮ ಸ್ಥಳವಿನ್ನೆಲಿದೆ ಹೇಳು.?????

ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ದೂಳು.?
ಜುಳು-ಜುಳು ಹರಿಯುವ ಹೊಳೆ ಹಳ್ಳಗಳ ನಿರ್ಯಾಕಿಷ್ಟು ಕೊಳಕು.?
ಈಜುವ ಮೀನಿಗೆ ದಾಹದ ಬಾಯಿಗೆ ಇಲ್ಲವೆ ಬದುಕುವ ಹಕ್ಕು.?
ಅಮ್ಮ ಇಲ್ಲವೇ ಬದುಕುವ ಹಕ್ಕು.?????

ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ದೂಳು.?
ಹಗಲು ಇರುಳು ಯಾಕಿಷ್ಟೊಂದು ಸಾವಿರ ಗಾಲಿಗಳುರುಳು.?
ಈ ಗದ್ದಲದೊಳು ಕೇಳಿಸದಾಗಿದೆ ನಿನ್ನೆ ಜೋಗುಳದ ಕೊಳಲು.?
ಅಮ್ಮ ನಿನ್ನ ಜೋಗುಳದ ಕೊಳಲು.?????

ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ದೂಳು.?
ನಿನ್ನ ಹೆರಳಿಗೂ ದೇವರ ಮುಡಿಗು ಹೇಗೆ ಮುಡಿಸಲೀ ಹೇಳು.?
ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ದೂಳು.?
ಅಮ್ಮ ಯಾಕಿಷ್ಟೊಂದು ದೂಳು.?????
ಅಮ್ಮ ಯಾಕಿಷ್ಟೊಂದು ದೂಳು.?????
ಅಮ್ಮ ಯಾಕಿಷ್ಟೊಂದು ದೂಳು.?????
ಅಮ್ಮ ಯಾಕಿಷ್ಟೊಂದು ದೂಳು.?????...

        ಏನಪ್ಪ ಈ ಹಾಡಿನಲ್ಲಿ ನಾವು ಗಮನಿಸಬೇಕಾದ.       ಅಂಶ ಅಂದರೆ ನಮ್ಮ ನಿಸರ್ಗಕ್ಕೂ ನಮ್ಮ ಮಾನವ ಸಂಕುಲಕ್ಕು ಇರುವ ಸಂಬಂಧ ಒಂದೇ ನಾಣ್ಯದ ಎರಡು ಮುಖಗಳಿದಂತೆ.ಅದನ್ನು ಯಾವತ್ತೂ ಸಹಾ ಬೇರೆ-ಬೇರೆ ಮಾಡಲು ಸಾಧ್ಯವಿಲ್ಲ ಅಲ್ವಾ... ಅದೇನೆ ಇರಲಿ ಸ್ನೇಹಿತರೆ ನಾವು ಅನುಭವಿಸುತ್ತಿರುವ ಈ ನೈಸರ್ಗಿಕ ಕಷ್ಟವೇನಲ್ಲ ದೂರಮಾಡಿ ನಾವು ಚೇನ್ನಾಗಿದ್ದು ನಮ್ಮ ಮುಂದಿನ ಪೀಳಿಗೆಗೂ ಸಹಾ ಚೇನ್ನಾಗಿರುವಂತೆ ಮಾಡಬೇಕಾಗುತ್ತದೆ ಅಲ್ವಾ ಸ್ನೇಹಿತರೆ.      
                                  ಮುರುಳಿ, ಯುವ ಸಂಚಲನ .
                                 ( ನಾ ನಿಮ್ಮವ ಸಮಾಜ ಸೇವಕ )